    ಮೂಲದೊಡನೆ ಪರಿಶೀಲಿಸಿ

ಕ್ಯಾಡ್ಮಿಯಂ

ಆವರ್ತಕೋಷ್ಟಕದಲ್ಲಿ ಎರಡನೆಯ ಗುಂಪಿನ ಐದನೆಯ ಆವರ್ತದ (ಪೀರಿಯಡ್) ಸಂಕ್ರಾಂತಿ ಲೋಹದಾತು.   ರಾಸಾಯನಿಕ ಸಂಕೇತ ಅಜ. ಪರಮಾಣು ತೂಕ 112.40. ಪರಮಾಣು ಸಂಖ್ಯೆ 48. ಇದರ ಎಲೆಕ್ಟ್ರಾನಿಕ್ ವಿನ್ಯಾಸ . ಸತುವನ್ನು ಕರಗಿಸುವ ಮೂಸೆಯಲ್ಲಿ ಕ್ಯಾಡ್ಮಿಯಮನ್ನು ಮೊದಲಬಾರಿಗೆ ಗುರುತಿಸಲಾಯಿತು. ಈ ಲೋಹ ಅದರ ಸಲ್ಫೈಡ್ ಮತ್ತು ಕಾರ್ಬೊನೇಟ್ ರೂಪದಲ್ಲಿ ದೊರೆಯುತ್ತದೆ. ಗ್ರೀನೋಕೈಟ್ ಎಂಬ ವಿರಳವಾದ ಅದುರು ಕ್ಯಾಡ್ಮಿಯಂ ಸಲ್ಫೈಡನ್ನು ಮುಖ್ಯಾಂಶವನ್ನಾಗಿ ಒಳಗೊಂಡಿದೆ. ಇದು ಗ್ರೀನ್‍ಲೆಂಡ್, ಸ್ಕಾಟ್‍ಲೆಂಡ್ ಮತ್ತು ಪೆನ್ಸಿಲ್ವೇನಿಯ ದೇಶಗಳಲ್ಲಿ ದೊರೆಯುತ್ತದೆ. ಔದ್ಯೋಗಿಕ ದೃಷ್ಟಿಯಿಂದ ಸತುವಿನ ಅದುರುಗಳೊಂದಿಗೆ 1% ಪ್ರಮಾಣದಲ್ಲಿ ಸಲ್ಫೈಡ್ ಮತ್ತು ಕಾರ್ಬೊನೇಟ್ ರೂಪಗಳಲ್ಲಿ ದೊರೆಯುವ ಅದುರುಗಳು ಮುಖ್ಯವಾದುವು.

	ಕ್ಯಾಡ್ಮಿಯಂ ಲೋಹವನ್ನು ಸಾಮಾನ್ಯವಾಗಿ ಸುತವಿನ ಲೋಹವನ್ನು ಪಡೆಯುವಾಗಲೇ ತೆಗೆಯುತ್ತಾರೆ. ಅದುರುಗಳನ್ನು ಕಾಯಿಸಿದಾಗ ಇವೆರಡು ಲೋಹಗಳೂ ಆವಿಯ ರೂಪದಲ್ಲಿ ಹೊರಬೀಳುತ್ತವೆ. ಕ್ಯಾಡ್ಮಿಯಮಿನ ಬಾಷ್ಪಶೀಲತೆ (ವೋಲಟೈಲಿಟಿ) ಸತುವಿಗಿಂತ ಅಧಿಕವಾಗಿರುವುದರಿಂದ ಲೋಹವನ್ನು ಆಂಶಿಕಾಸವನದ ಮೂಲಕ (ಫ್ರಾಕ್ಷನಲ್ ಡಿಸ್ಟಿಲೇಷನ್) ಸತುವಿನಿಂದ ಬೇರ್ಪಡಿಸಬಹುದು. ಅಶುದ್ಧವಾದ ಈ ಆವಿಯಲ್ಲಿ ಲೋಹ ಮತ್ತು ಲೋಹದ ಆಕ್ಸೈಡ್ ಸೇರಿರುತ್ತವೆ. ಈ ಮಿಶ್ರಣವನ್ನು ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ವಿಲೀನಮಾಡಿ ಕ್ಯಾಡ್ಮಿಯಮನ್ನು ಕಾರ್ಬೊನೇಟ್ ರೂಪಕ್ಕೆ ಪರಿವರ್ತಿಸುತ್ತಾರೆ. ಕಾರ್ಬೊನೇಟನ್ನು ಕಾಯಿಸಿದಾಗ ದೊರೆಯುವ ಆಕ್ಸೈಡನ್ನು ಇಂಗಾಲದಿಂದ 8000 ಸೆಂ.ನಲ್ಲಿ ಅಪಕರ್ಷಿಸಿ ಶುದ್ಧವಾದ ಲೋಹವನ್ನು ಪಡೆಯಬಹುದು. ಇನ್ನೊಂದು ವಿಧಾನದಲ್ಲಿ ವಿದ್ಯುಚ್ಛಕ್ತಿಯನ್ನು ಸತು ಮತ್ತು ಕ್ಯಾಡ್ಮಿಯಂ ಮಿಶ್ರಿತ ಲವಣಗಳ ದ್ರಾವಣದ ಮೂಲಕ ಹಾಯಿಸಿ ಕ್ಯಾಡ್ಮಿಯಮನ್ನು ಬೇರ್ಪಡಿಸುತ್ತಾರೆ. ಮಾರುಕಟ್ಟೆಯಲ್ಲಿ ಈ ಲೋಹ ಪುಡಿ, ಶುದ್ಧವಾದ ಕಡ್ಡಿಗಳು, ಗಟ್ಟಿಗಳು, ಹಲಗೆಗಳು ಮತ್ತು ಶುದ್ಧವಾದ ಹರಳುಗಳ ರೂಪದಲ್ಲಿ ಮಾರಾಟವಾಗುತ್ತದೆ. 

	ಗುಣಗಳು: ಕ್ಯಾಡ್ಮಿಯಂ ಬೆಳ್ಳಿಯಂತೆ ಬೆಳ್ಳಗಿರುವ, ಸತುವಿಗಿಂತ ಮೃದುವಾದ ಆದರೆ ತವರಕ್ಕಿಂತ ಕಠಿಣವಾದ ಲೋಹ. ಇದನ್ನು ತೆಳುವಾಗಿ ಎಳೆಯಬಹುದು ಮತ್ತು ತಟ್ಟಬಹುದು. ಜಲಮಿಶ್ರಿತ ಗಾಳಿಯಲ್ಲಿ ಇದು ಮಸಕಾಗುವುದು. ಕ್ಯಾಡ್ಮಿಯಮಿನ ಅನೇಕ ಲವಣಗಳನ್ನು ತಯಾರಿಸಲಾಗಿದೆ. ಬಹುತೇಕ ಲವಣಗಳಲ್ಲಿ, ಕ್ಯಾಡ್ಮಿಯಂ ದ್ವಿವೇಲೆನ್ಸಿ ಉಳ್ಳದ್ದು. ಕ್ಯಾಡ್ಮಿಯಂ ಸಯನೈಡ್ (ಅಓ) ಮತ್ತು ಅಮೋನಿಯಂ (ಓಊ4 +) ಅಯಾನುಗಳೊಂದಿಗೆ ಸಂಕೀರ್ಣ ಅಣುವನ್ನು ಉಂಟುಮಾಡುತ್ತದೆ. ಕ್ಯಾಡ್ಮಿಯಂ ಕ್ಲೋರೈಡಿನ ಜಲೀಯ ದ್ರಾವಣ ವಿದ್ಯುತ್ತನ್ನು ಅಲ್ಪಪರಿಮಾಣದಲ್ಲಿ ವಹನಿಸುತ್ತದೆ. ಇದರ ಹರಳಿನ ರಚನೆ, ಕ್ಲೋರೈಡ್, ನಿಜವಾದ ಅಯಾನಿಕ್ ಸಂಯುಕ್ತ ಅಲ್ಲವೆಂದು ತೋರಿಸುತ್ತದೆ. ಈ ಗುಣದಿಂದ ಮತ್ತು ಸ್ವಯಂಸಂಕೀರ್ಣ ಹೊಂದುವ ಗುಣದಿಂದಾಗಿ ಈ ಲವಣ ಅಲ್ಪಪರಿಮಾಣದಲ್ಲಿ ಅಯಾನೀಕರಿಸುತ್ತದೆ. ದ್ರಾವಣದಲ್ಲಿ ಕ್ಯಾಡ್ಮಿಯಂ ಕ್ಲೋರೈಡ್ ಮುಂದೆ ಬರೆದಿರುವಂತೆ ವರ್ತಿಸುವುದೆಂದು ಭಾವಿಸಲಾಗಿದೆ.

ಅಜ  ಛಿಟ2 (          ಛಿಜ +++ಛಿಟ(
ಅಜ ಛಿಟ2   (         ಛಿಜ+++ [ಛಿಜ ಛಿಟ4 =]   ಸ್ವಯಂ ಸಂಕೀರ್ಣ
	ಉಪಯೋಗಗಳು: ಕ್ಯಾಡ್ಮಿಯಮನ್ನು ಅಧಿಕ ಮೊತ್ತದೆಲ್ಲಿ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳಿಗೆ ರಕ್ಷಾಲೇಪನದಂತೆ ಉಪಯೋಗಿಸುತ್ತಾರೆ. ಈ ಲೋಹವನ್ನೊಳಗೊಂಡಿರುವ ಮಿಶ್ರಲೋಹಗಳಿಗೆ ಅಲ್ಯೂಮಿನಿಯಂ ಬೆಸುಗೆ, ಬಾಲ್‍ಬ್ಯಾರಿಂಗ್, ಫ್ಯೂಸ್ ತಂತಿಗಳು, ಟ್ರಾಲಿತಂತಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉಪಯೋಗ ಉಂಟು. ಹೊಗೆಬಾಂಬುಗಳು, ಸಿಡಿಮದ್ದುಗಳು, ದೀಪಗಳು, ವಿದ್ಯುತ್ ಸಲಕರಣೆಗಳು, ತಾಪದೀಪ್ತ ದೀಪಗಳ ತಂತುಗಳು (ಇನ್‍ಕ್ಯಾಂಡೆಸೆಂಟ್ ಲ್ಯಾಂಪ್ ಫಿಲಮೆಂಟ್ಸ್) ಮುಂತಾದವುಗಳ ತಯಾರಿಕೆಯಲ್ಲಿಯೂ ದಂತಚಿಕಿತ್ಸೆ. ಪಿಂಗಾಣಿ ಕೈಗಾರಿಕೆ, ಗಾಜಿನ ತಯಾರಿಕೆ, ಮುದ್ರಣಕಾರ್ಯ, ನಿಕೆಲ್ ಪ್ಲೇಟಿಂಗ್, ಲಿಥೋಗ್ರಫಿ, ವಿದ್ಯುತ್‍ಕೋಶಗಳು. ನಿಕೆಲ್-ಕ್ಯಾಡ್ಮಿಯಂ ಸ್ಟೋರೇಜ್ ಬ್ಯಾಟರಿಗಳಲ್ಲಿಯೂ ಕ್ಯಾಡ್ಮಿಯಮನ್ನು ಬಳಸುತ್ತಾರೆ. ಇತ್ತೀಚೆಗೆ ಇದನ್ನು ಪರಮಾಣು ರೀಯಾಕ್ಟರಿನಲ್ಲಿ ಪರಮಾಣುವಿದಳನವನ್ನು ನಿಧಾನಗೊಳಿಸುವ (ಮಾಡರೇಟರ್) ವಸ್ತುವಾಗಿ ಉಪಯೋಗಿಸುತ್ತಿದ್ದಾರೆ. ಕ್ಯಾಡ್ಮಿಯಂ ಟಂಗ್‍ಸ್ಟೇಟನ್ನು ಫ್ಲೂರಸೆಂಟ್ ಬಣ್ಣವಾಗಿ ಉಪಯೋಗಿಸುತ್ತಾರೆ. 

ಕ್ಯಾಡ್ಮಿಯಂ ಮಿಶ್ರಲೋಹಗಳು

ಬೆಸುಗೆ ಹಾಕಬಲ್ಲ (ಫ್ಯೂಸಿಬಲ್) ಮಿಶ್ರ ಲೋಹಗಳು                    ಲೋಹಗಳ ಪ್ರಮಾಣ
  ದ್ರವೀಕರಣ ಉಷ್ಣತೆ

700ಸೆಂ (ವುಡ್ಸ್‍ನ ಲೋಹ)   .        . . . ..      18% ಕ್ಯಾಡ್ಮಿಯಂ, 50% ತವರ, 32%ಸೀಸ
700 ಸೆಂ.(ಲಿಪೋವಿಡ್ಸ್‍ನ ಲೋಹ)       . . . ..       12.5% ಕ್ಯಾಡ್ಮಿಯಂ, 50% ಬಿಸ್ಮತ್, 
                                           25% ಸೀಸ, 12.5% ತವರ
91.50 ಸೆಂ                        . . .. .    8% ಕ್ಯಾಡ್ಮಿಯಂ, 52% ಬಿಸ್ಮತ್, 40% ಸೀಸ
1450 ಸೆಂ                       . .. ..      18% ಕ್ಯಾಡ್ಮಿಯಂ, 50% ತವರ, 32% ಸೀಸ

ಇತರ ಮಿಶ್ರ ಲೋಹಗಳು

 4200 ಸೆಂ.                   . . . .           90% ಕ್ಯಾಡ್ಮಿಯಂ       10% ಬೆಳ್ಳಿ
 6100 ಸೆಂ.                   . . . .           70%               30% 
 7600 ಸೆಂ.                   . . . .           50%               50% 
 2800 ಸೆಂ                    . . . .          90%                10% ಸತು
 2950 ಸೆಂ                   . . .. ..          70%                30% ಸತು
 3270 ಸೆಂ                   . . . . .          50%                50% 

                                                         			 (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ